ಮೂಡುಬಿದಿರೆ ಗಣೇಶೋತ್ಸವಕ್ಕೆ ವೈಭವದ ತೆರೆ

ಜಾತ್ಯತೀತ ಹಬ್ಬವೆಂದೇ ಆಚರಿಸಲಾಗುತ್ತಿರುವ ಮೂಡುಬಿದಿರೆ ಗಣೇಶೋತ್ಸವಕ್ಕೆ ಮಂಗಳವಾರ ರಾತ್ರಿ ವೈಭವದ ತೆರೆಯನ್ನು ಎಳೆಯಲಾಯಿತು. ಸಮಾಜಮಂದಿರದಿಂದ ಆಕರ್ಷಕ ಸ್ತಬ್ಧಚಿತ್ರ,ಹುಲಿ ವೇಷ,ಚೆಂಡೆ ಮೊದಲಾದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು. ಅಲಂಗಾರು ಶ್ರೀಮಹಲಿಂಗೇಶ್ವರ ದೇವಸ್ಥಾನದಲ್ಲಿ ಗಣಪನ ವಿಗ್ರಹವನ್ನು ವಿಸರ್ಜಿಸಲಾಯಿತು.

Read More...

Top News

ವೇಣೂರು ಸಿಎ ಬ್ಯಾಂಕ್ ಅವ್ಯವಹಾರ ಪ್ರಕರಣ: ನಿರೀಕ್ಷಣಾ ಜಾಮೀನು ಮಂಜೂರು

ಹನ್ನೊಂದು ತಿಂಗಳುಗಳ ಕಾಲ ಕಾನೂನು ಬಾಹಿರವಾಗಿ ವೇತನ ನೀಡಿ ಬಳಿಕ ಬ್ಯಾಂಕ್ ನ ನಿರ್ಣಯಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿದ ಆರೋಪದ ಮೇರೆಗೆ ಬಂಧನದ ಭೀತಿ ಎದುರಿಸುತ್ತಿದ್ದ ಆರೋಪಿಗಳ ಪೈಕಿ ಐದು ಮಂದಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

Read More >>

ಬಾಬುರಾಜೇಂದ್ರ ಶಾಲೆಯಲ್ಲಿ ವಿಮೆಯ ಕುರಿತು ಮಾಹಿತಿ

ಬಾಬು ರಾಜೇಂದ್ರ ಪ್ರಸಾದ್ ಪೌಢಶಾಲೆಯಲ್ಲಿ ವಿಮೆ ಇದರ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.

Read More >>

ಮೂಡುಬಿದಿರೆ: ಮಿತ್ರವೃಂದದಿಂದ ಗಾನ ಹಾಸ್ಯ ನೃತ್ಯ ವೈಭವ

ಕ್ಷೀಣವಾಗುತ್ತಿರುವ ಸಂಸ್ಕಾರದಿಂದ ಮನುಷ್ಯನಲ್ಲಿ ಕೌರ್ಯ ಹೆಚ್ಚಾಗುತ್ತಿದೆ. ನಮ್ಮಲ್ಲಿ ಧಾರ್ಮಿಕ, ಸಾಂಸ್ಕೃತಿಕ ಪ್ರಜ್ಞೆ ಮೂಡಿ ಸಾತ್ವಿಕರಾದರೆ ಮಾತ್ರ ಕೌರ್ಯದಿಂದ ವಿಮುಖರಾಗಬಹುದು ಎಂದು ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಅಭಿಪ್ರಾಯಪಟ್ಟರು.

Read More >>

ಮೂಡುಬಿದಿರೆ ಗಣೇಶೋತ್ಸವ ಸಮಾರೋಪ

ಗಣಪತಿ ಶಕ್ತಿಯ ಪ್ರತೀಕ. ಶಾಂತಿಪ್ರಿಯ ಊರಾದ ಮೂಡಬಿದಿರೆಯಲ್ಲಿ ದೈವಿಕಶಕ್ತಿಯಿದೆ. ಇದರಿಂದಾಗಿ ಮೂಡುಬಿದಿರೆಯಲ್ಲಿ ಯಾವುದೇ ರೀತಿ ಕೋಮುಸಂಘರ್ಷಗಳಾಗದೆ ಸಾಮರಸ್ಯತೆ ಪಸರಿದೆ. ಧಾರ್ಮಿಕ ಸಹಿಷ್ಣುತೆಗೆ ಮೂಡುಬಿದಿರೆ ಮಾದರಿ ಎಂದು ಪಣಂಬೂರು ಎಸಿಪಿ ರವಿ ಕುಮಾರ್ ಹೇಳಿದರು.

Read More >>

ಶಿರ್ತಾಡಿ: ಅಂಚೆ ಪಾಲಕರಿಗೆ ವಿದಾಯ

ಅಂಚೆ ಸೇವೆಯಿಂದ ನಿವೃತ್ತಗೊಳ್ಳುತ್ತಿರುವ ಶಿರ್ತಾಡಿ ಅಂಚೆಪಾಲಕ ಎಲ್.ರಮೇಶ್ ಶೆಟ್ಟಿಗಾರ ಅವರಿಗೆ ಶಿರ್ತಾಡಿಯ ಉಪ ಹಾಗೂ ಶಾಖಾ ಅಂಚೆ ಕಚೇರಿ ವತಿಯಿಂದ ವಿದಾಯ ಸಮಾರಂಭ ನಡೆಯಿತು.

Read More >>

ಒಂಟಿಕಟ್ಟೆ: 25 ನೇ ವರ್ಷದ ಶೋಭಾಯಾತ್ರೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಒಂಟಿಕಟ್ಟೆ ಇವರ 25 ನೇ ವರ್ಷದ ಶೋಭಾಯಾತ್ರೆ ಭಾನುವಾರ ಜರುಗಿತು.

Read More >>

ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಗೆ 11 ಬಾರಿ ಪ್ರಶಸ್ತಿ

ಮಂಗಳೂರು ಗ್ರಾಮಾಂತರ ವಿಭಾಗವನ್ನು ಪ್ರತಿನಿಧಿಸಿದ ಮೂಡುಬಿದಿರೆ ಆಳ್ವಾಸ್ ಪ.ಪೂ.ಕಾಲೇಜು ಬಾಲಕ ಹಾಗೂ ಬಾಲಕಿಯರ ತಂಡ ಎಸ್.ಡಿ.ಪಿ.ಟಿ. ಪ.ಪೂ. ಕಾಲೇಜು ಕಟೀಲು ಇಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ವಿಜೇತರಾಗುವ ಮೂಲಕ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಸತತ 11 ನೇ ಬಾರಿ ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

Read More >>

ಸಪ್ಟೆಂಬರ್ 5,6 ಶ್ರೀ ಮಹಾವೀರ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಭಾರತದಲ್ಲಿ ರಾಷ್ಟ್ರೀಯತೆಯ ಕಲ್ಪನೆ: ಚಾರಿತ್ರಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಪ್ರವೃತ್ತಿ ಎಂಬ ವಿಷಯದ ಕುರಿತು ಸಪ್ಟೆಂಬರ್ 5 ಮತ್ತು 6ರಂದು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವು ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆಯಲಿದೆ.

Read More >>

ಅಂತರ್ ಕಾಲೇಜು ಗುಡ್ಡಗಾಡು: ಆಳ್ವಾಸ್ ಗೆ ಅವಳಿ ಪ್ರಶಸ್ತಿ

ಗುಡ್ಡಗಾಡು ಓಟದಲ್ಲಿ ಪುರುಷರ ವಿಭಾಗದ ಶಾಶ್ವತ ಫಲಕ ಕುರುಂಜಿ ವಿಶ್ವನಾಥ ಗೌಡ ಮೆಮೋರಿಯಲ್ ಟ್ರೋಫಿ ಮತ್ತು ಮಹಿಳಾ ವಿಭಾಗದ ಕೈಕುರೆ ರಾಮಣ್ಣ ಗೌಡ ಮೆಮೋರಿಯಲ್ ಟ್ರೋಫಿ ಇವೆರಡನ್ನೂ ಆಳ್ವಾಸ್ ಕಾಲೇಜು ಮೂಡುಬಿದಿರೆ ಸತತ 13 ನೇ ಬಾರಿ ಪಡೆದುಕೊಂಡಿದೆ.

Read More >>

ಕಾಂತಾವರದಲ್ಲಿ ಅಕ್ಕಮಹಾದೇವಿ ಕುರಿತ ಉಪನ್ಯಾಸ

ವಿಶ್ವದ ದಾರ್ಶನಿಕ ಮತ್ತು ಅನುಭಾವ ಪರಂಪರೆಗೆ ಸ್ತ್ರೀಶಕ್ತಿಯಾಗಿ ವಿರಾಗಿಣಿ ಅಕ್ಕಮಹಾದೇವಿಯವರ ಕೊಡುಗೆ ಗಣನೀಯವಾಗಿದೆ. ಕನ್ನಡದ ಮೊದಲ ವಚನಕಾರ್ತಿಯೆಂಬ ಬಿರುದು ಕೂಡಾ ಅಕ್ಕಮಹಾದೇವಿಗೆ ಸಲ್ಲುತ್ತದೆ ಎಂಬುದಾಗಿ ಲೇಖಕಿ, ಮಾಜಿ ಸಚಿವೆ ಡಾ.ಲೀಲಾದೇವಿ ಆರ್.ಪ್ರಸಾದ್ ತಿಳಿಸಿದರು.

Read More >>

ಮೂಡುಬಿದಿರೆ: ಜಿ.ಎಸ್.ಬಿ. ಜನಗಣತಿಗೆ ಚಾಲನೆ

ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನುಮಂತ ದೇವಸ್ಥಾನದ ಹೋಬಳಿಯ ಜಿ.ಎಸ್. ಬಿ. ಸಮಾಜ ಬಾಂಧವರ ಜನಗಣತಿಗೆ ಭಾನುವಾರ ಚಾಲನೆ ನೀಡಲಾಯಿತು.

Read More >>

ಪುತ್ತಿಗೆಯಲ್ಲಿ ಮಹಿಳಾ ಗ್ರಾಮಸಭೆ

ಪುತ್ತಿಗೆ ಗ್ರಾ.ಪಂ ವತಿಯಿಂದ ಪಂಚಾಯಿತಿ ಸಭಾಭವನದಲ್ಲಿ ಮಹಿಳಾ ಗ್ರಾಮಸಭೆ ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ ಅಧ್ಯಕ್ಷತೆ ಸೋಮವಾರ ನಡೆಯಿತು.

Read More >>

Picture


Alvas vishwa Nudisiri

Exclusive

ಬೀಯಿಂಗ್ ತುಳುವ ಹೆಲ್ಫ್ ಫೌಂಡೇಶನ್ ನಿಂದ ಸಾಮಾಜಿಕ ಕಳಕಳಿ

ಇಂದು ವೇಗವಾಗಿ ಬೆಳೆಯುತ್ತಿರುವ ಅಂತರ್ಜಾಲವೆಂದರೆ ಹೈಕ್, ವಾಟ್ಸ್ಅಫ್ ಮತ್ತು ಫೇಸ್ ಬುಕ್ ಈ ಮೂರು ಜಾಲಗಳಲ್ಲಿಯೂ ಯುವಜನತೆ ಸೇರಿದಂತೆ ಹಿರಿಯರೂ ಕೂಡಾ ಜೋತುಬಿದ್ದಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಆದರೆ ಫೇಸ್ ಬುಕ್ ನ್ನು ಕೇವಲ ಟೈಪಾಸ್ ಗಾಗಿ ಬಳಸದೆ ಮಾನವೀಯತೆಯ ಮೂಲಕ ಜನಸೇವೆಗೆ ಬಳಸಿದ ಯಶೋಗಾಥೆ ಇಲ್ಲಿದೆ....

Read More >>

ಯುವಕ ಸಾವು ಪ್ರಕರಣ: ಪರಿಹಾರ ಒತ್ತಾಯಿಸಿ ನೆಲ್ಲಿಕಾರಿನಲ್ಲಿ ಪ್ರತಿಭಟನೆ

ನೆಲ್ಲಿಕಾರು ಗ್ರಾಮದ ವಸಂತಿ ಪೂಜಾರ್ತಿ ಎಂಬವರ ಪುತ್ರ ಪ್ರಶಾಂತ್, ಕಳೆದ ಜೂ.11 ರಂದು ಉಪ್ಪಿನಂಗಡಿ ಸಂಗಮ ಸ್ಥಳದಲ್ಲಿ ತನ್ನ ತಂದೆಯ ಪಿಂಡ ಪ್ರಧಾನ ಮಾಡುವ ವೇಳೆ ಆಕಸ್ಮಾತಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದು ಆ ಕುಟುಂಬಕ್ಕೆ ಇನ್ನೂ ಪರಿಹಾರ ಸಿಗದಿರುವುದರಿಂದ ನೆಲ್ಲಿಕಾರು ಗ್ರಾ.ಪಂ ಕಚೇರಿಯೆದುರು ಸೋಮವಾರ ಪ್ರತಿಭಟನೆ ನಡೆಯಿತು.

Read More >>

ಕಡಲಕೆರೆ: ಬೋಟಿಂಗ್ ಗೆ ಚಾಲನೆ

ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದ ಕೆರೆಗೆ 28ಸಾವಿರ ಮೀನುಮರಿಗಳನ್ನು ಕಡಲಕೆರೆಗೆ ಭಾನುವಾರ ಬಿಡಲಾಯಿತು. ಇದೇ ಸಂದರ್ಭದಲ್ಲಿ ಬೋಟಿಂಗ್ ಚಾಲನೆ ನೀಡಲಾಯಿತು.

Read More >>

ಪ್ರಿಯತಮನ ಸಾವಿನಿಂದ ನೊಂದು ಉಪನ್ಯಾಸಕಿ ಆತ್ಮಹತ್ಯೆ

ತನ್ನ ಪ್ರಿಯತಮನ ಸಾವಿನಿಂದ ನೊಂದಿರುವ ಬಗ್ಗೆ ಡೆತ್ ನೋಟ್ ಬರೆದು ಉಪನ್ಯಾಸಕಿಯೊಬ್ಬರು ಗಾಂಧಿನಗರ ಅಪಾರ್ಟ್ ಮೆಂಟ್ ತಮ್ಮ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಶನಿವಾರ ಸಂಜೆ ಬೆಳಕಿಗೆ ಬಂದಿದೆ.

Read More >>

VIDEO


ALVAS INDEPENDENCE CELEBRATION
Moodbidri Ganeshostava 2015Alvas  Advt 2014HP GASCHAYA PALACE